Blogs

Ayush admin | Nov 23, 2020 | 361

ಹೈಪರ್ ಆ್ಯಸಿಡಿಟಿಗೆ ಮದ್ದು ಬೂದುಗುಂಬಳಕಾಯಿ ಪುದೀನಾ ರಸ

ಬೇಕಾಗುವ ಸಾಮಾಗ್ರಿಗಳು
ಬಿಳಿ ಬೂದುಗುಂಬಳಕಾಯಿ – 1 ತುಂಡು
ಜೀರಿಗೆ ಪುಡಿ -1 ಚಮಚ
ಧನಿಯಾ ಪುಡಿ – 1 ಚಮಚ
ಚಾಟ್ ಮಸಾಲ- 1/4ಚಮಚ
ಪುದೀನಾ ಸೊಪ್ಪು- 15 ಎಲೆ
ಚಕ್ಕೆ ಪುಡಿ – 1 ಚಿಟಿಕೆ
ಕಾಳುಮೆಣಸಿನ ಪುಡಿ – 1 ಚಿಟಿಕೆ
ಕಲ್ಲುಪ್ಪು/ ಸೈಂಧವ ಲವಣ ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಸಣ್ಣದಾಗಿ ಕತ್ತರಿಸಿಕೊಂಡ ಬೂದುಗುಂಬಳಕಾಯಿ ಹಾಗೂ ಪುದೀನಾವನ್ನು ರುಬ್ಬಿಕೊಳ್ಳಬೇಕು. ರುಬ್ಬುವಾಗ ಉಪ್ಪು ಹಾಕಿದಲ್ಲಿ ಹೆಚ್ಚು ರಸ ಉತ್ಪತ್ತಿಯಾಗುವುದರಿಂದ ಸ್ವಲ್ಪ ಕಲ್ಲುಪ್ಪು ಅಥವಾ ಸೈಂಧವ ಲವಣ ಸೇರಿಸಬಹುದು. ನಂತರ ರುಬ್ಬಿದ ರಸವನ್ನು ಒಂದು ಲೋಟಕ್ಕೆ ಹಾಕಿ ಒಂದು ಚಿಟಿಕೆ ಸೈಂಧವಲವಣ, ಮೂರು ಚಿಟಿಕೆ ಧನಿಯಾ ಪುಡಿ, ಒಂದು ಚಿಟಿಕೆ ಚಕ್ಕೆ ಪುಡಿ, ಒಂದು ಚಿಟಿಕೆ ಕಾಳುಮೆಣಸಿನ ಪುಡಿ, ಎರಡು ಚಿಟಿಕೆ ಚಾಟ್ ಮಸಾಲ, ಮೂರು ಚಿಟಿಕೆ ಜೀರಿಗೆ ಪುಡಿ ಹಾಕಿ, ಪುದೀನಾ ಸೊಪ್ಪಿನಿಂದ ಅಲಂಕರಿಸಿದರೆ ಬೂದುಗುಂಬಳಕಾಯಿ ಪುದೀನಾ ರಸ ಸವಿಯಲು ರೆಡಿ. ಈ ರಸವನ್ನು ಬೆಳಗ್ಗೆ ಖಾಲಿಹೊಟ್ಟೆಗೆ ಕುಡಿದರೆ ತುಂಬಾ ಉತ್ತಮ. ಹೈಪರ್ ಆ್ಯಸಿಡಿಟಿಯಿಂದ ಬರುವ ಹುಳಿತೇಗಿನ ಸಮಸ್ಯೆಯೂ ನಿವಾರಣೆಯಾಗುವುದು

Ayush TV

Ayush Tv- World's First Health, Wellness, Lifestyle and Infotainment Channel