Blogs

ayushadmin | Jan 15, 2021 | 433

ಮೂತ್ರಕೋಶದ ಸಮಸ್ಯೆ ನಿವಾರಿಸುವ ಬೂದುಗುಂಬಳ

ತಂಪುಗುಣವುಳ್ಳಂತಹ ಬೂದುಗುಂಬಳ ಬೇಸಿಗೆಕಾಲದಲ್ಲಿ ಕಂಡುಬರುವಂತಹ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಪರಿಹಾರವನ್ನು ನೀಡುತ್ತದೆ. ಸಿಹಿತಿಂಡಿ, ಅಡುಗೆಗೆ ಮಾತ್ರವಲ್ಲದೇ ಔಷಧಿಯನ್ನಾಗಿಯೂ ಬೂದುಗುಂಬಳಕಾಯಿಯನ್ನು ಬಳಸಲಾಗುತ್ತದೆ. ವಿವಿಧ ಪೋಷಕಾಂಶ ಹಾಗೂ ಔಷಧೀಯ ಗುಣಗಳಿರುವ ಬೂದುಗುಂಬಳಕಾಯಿಯ ಬೀಜ ಹಾಗೂ ತಿರುಳಿನಲ್ಲಿ ಆರೋಗ್ಯವನ್ನು ಹೆಚ್ಚಿಸುವ ಗುಣಗಳಿವೆ.

ಬೂದುಗುಂಬಳಕಾಯಿ ಸೇವನೆ ಉರಿಮೂತ್ರ, ಪಾಂಡುರೋಗ, ಜ್ವರ, ರಕ್ತವಾಂತಿ, ಅಜೀರ್ಣ, ಕಿಡ್ನಿಯಲ್ಲಿನ ಕಲ್ಲು, ರಕ್ತಭೇದಿಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ದೇಹದ ಕೊಬ್ಬನ್ನು ಕರಗಿಸಲು ಬೂದುಕುಂಬಳಕಾಯಿ ಸೇವನೆ ಉತ್ತಮ. ಕುಂಬಳಕಾಯಿ ಬೀಜಗಳಿಂದ ತಯಾರಿಸಲಾಗುವ ಎಣ್ಣೆಯು ರಕ್ತನಾಳ ಮತ್ತು ನರಗಳನ್ನು ಬಲಗೊಳಿಸುತ್ತದೆ.

ಮನೆಮದ್ದು
• ಕುಂಬಳಕಾಯಿಯ ರಸಕ್ಕೆ ಕೆಂಪುಕಲ್ಲುಸಕ್ಕರೆ ಹಾಕಿ ಕುಡಿದರೆ ಪಿತ್ತ ಶಮ

• ಕುಂಬಳಕಾಯಿಯ ರಸ ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗುವುದು 

• ಖಾಲಿಹೊಟ್ಟೆಗೆ ಕುಂಬಳಕಾಯಿ ರಸ ಕುಡಿದರೆ ಕರುಳಿನ ಹುಣ್ಣಿಗೆ ಉತ್ತಮ
• ಬೂದುಗುಂಬಳಕಾಯಿ ರಸದ ಸೇವನೆಯಿಂದ ಮೂತ್ರಕೋಶ ಶುದ್ಧಿಯಾಗುತ್ತದೆ
• ಮೂತ್ರಕೋಶದಲ್ಲಿ ಕಲ್ಲು ಹಾಗೂ ಮೂತ್ರ ತಡೆ ಸಮಸ್ಯೆಗೂ ಕುಂಬಳಕಾಯಿ ರಸ ಉತ್ತಮ
• ಬೂದುಗುಂಬಳಕಾಯಿ ಸಿಪ್ಪೆಯನ್ನು ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ತಲೆಗೆ ಹಚ್ಚಿದರೆ ಕೂದಲು ಮೃದುವಾಗುತ್ತದೆ
ಇಷ್ಟೆಲ್ಲಾ ಆರೋಗ್ಯಕರ ಅಂಶಗಳಿರುವ ಕುಂಬಳಕಾಯಿ ತೂಕ ಇಳಿಕೆಗೂ ನೆರವಾಗುತ್ತದೆ. ಈ ಎಲ್ಲಾ ಪ್ರಯೋಜನಗಳನ್ನು ನೋಡಿದ ಮೇಲಂತೂ ಕುಂಬಳಕಾಯಿ ತಿನ್ನೋದು ಆರಂಭಿಸ್ತೀರಾ ತಾನೆ..?

Ayush TV

Ayush Tv- World's First Health, Wellness, Lifestyle and Infotainment Channel