ಮೊಡವೆ ಹೆಣ್ಣಿಗೆ ಒಡವೆ ಎನ್ನುತ್ತಾರೆ. ಆದರೆ ಮೊಡವೆ ಇರೋ ಹುಡುಗಿಯರ ವೇದನೆ ಅವರಿಗೆ ಮಾತ್ರ ಗೊತ್ತು. ಈಗೀಗ ಮೊಡವೆ ಯುವತಿಯರಲ್ಲಿ ಮಾತ್ರವಲ್ಲದೇ ಯುವಕರಲ್ಲೂ ಕಾಣಿಸಿಕೊಳ್ಳುತ್ತಿದೆ.
ಇದಕ್ಕೆ ಮುಖ್ಯ ಕಾರಣ ಆಹಾರ ಮತ್ತು ಜೀವನಶೈಲಿ. ಹೆಣ್ಣು ಮಕ್ಕಳಲ್ಲಿ ಕಂಡು ಬರುವ ಹಾರ್ಮೋನ್ ವ್ಯತ್ಯಾಸವೂ ಕೂಡಾ ಮೊಡವೆಗೆ ಕಾರಣವಾಗಬಹುದು. ಕೀವು, ನೋವು ತುಂಬಿಕೊಂಡು ಮನಸ್ಸಿಗೆ ಕಿರಿಕಿರಿಯುಂಟು ಮಾಡುವ ಮೊಡವೆಯನ್ನು ನಿವಾರಿಸಲು ಮನೆಮದ್ದನ್ನು ಮಾಡಬಹುದು
ಇಲ್ಲಿದೆ ಸಿಂಪಲ್ ಮನೆಮದ್ದು
• ಜಾಯಿಕಾಯಿ, ಕಾಳುಮೆಣಸು, ಶ್ರೀಗಂಧವನ್ನು ಅರೆದು ಮೊಡವೆಗೆ ಹಚ್ಚಬಹುದು
• ಮಂಜಿಷ್ಟ, ರಕ್ತಚಂದನ, ಶ್ರೀಗಂಧ, ಅರಳೀಮರದ ಕುಡಿಯನ್ನು ಹಾಲಿನೊಂದಿಗೆ ಅರೆದು ಮೊಡವೆಗೆ ಹಚ್ಚಬಹುದು
• ದಾಳಿಂಬೆ ಹಣ್ಣಿನ ಬೀಜವನ್ನು ರುಬ್ಬಿ ಮುಖಕ್ಕೆ ಹಚ್ಚುವುದರಿಂದ ಮೊಡವೆಗುಳ್ಳೆ ವಾಸಿಯಾಗುತ್ತದೆ
• ಧನಿಯಾ, ಹೆಸರುಕಾಳನ್ನು ಪುಡಿ ಮಾಡಿ ದಿನಕ್ಕೆ ಮೂರ್ನಾಲ್ಕು ಬಾರಿ ಮುಖ ತೊಳೆಯುವುದರಿಂದ ಮುಖದಲ್ಲಿ ಎಣ್ಣೆ ಅಂಶ ಕಡಿಮೆಯಾಗಿ ಮೊಡವೆ ಕಡಿಮೆಯಾಗುತ್ತದೆ.
• ಮುಖದ ಸ್ವಚ್ಛತೆಯನ್ನು ಕಾಪಡಿಕೊಳ್ಳುವುದು ಮುಖ್ಯ
• ಮೊಡವೆಯನ್ನು ಆಗಾಗ ಮುಟ್ಟಿಕೊಳ್ಳುವುದು, ಚಿವುಟುವುದು ಮಾಡಬಾರದು