Blogs

Ayush admin | Nov 24, 2020 | 576

Ayush TV Short Film Awards

A great platform to budding directors to make short movies in “AYUSH T.V. SHORT FILM CONTEST”
Ayush TV introduces short film Awards a platform to perform for many young talents who have hidden talents and not able to get chance to expose their skills .

ಆಯುಷ್ ಟಿವಿ ಕಿರುಚಿತ್ರ ಸ್ಪರ್ಧೆ   “ ನಾಳೆಯ ನಿರ್ದೇಶಕರು

ಕನ್ನಡ ಮಾಧ್ಯಮ ಲೋಕದಲ್ಲಿ ಒಂದು ವಿನೂತನ ಪ್ರಯೋಗ, ಹಿಂದೆಂದೂ ಯಾರು ಮಾಡಿರದ ವಿಭಿನ್ನ ಪ್ರಯತ್ನ, “ಆಯುಷ್ ಟಿವಿ” ಅನ್ವೇಷಿಸಿರುವ  ರಾಜ್ಯದ ಮೊಟ್ಟಮೊದಲ ಕಿರುಚಿತ್ರ ಸ್ಪರ್ಧೆ.

ಸಮೃದ್ಧ ಕರ್ನಾಟಕದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ ಪ್ರತಿಭೆಗಳಿಗೆ ಮಾರ್ಗದರ್ಶನ, ಗುರಿಗೆ ತಕ್ಕ ಸಹಕಾರ, ಪ್ರೋತ್ಸಾಹಿಸೋ ಮನಸ್ಸುಗಳ ಕೊರತೆ ಇದೆ.ಈ ಎಲ್ಲಾ ವಿಚಾರಗಳನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿಯೇ “ಆಯುಷ್ ಟಿವಿ” ನಾಳೆಯ ನಿರ್ದೇಶಕರು ಅನ್ನು ವಿನೂತನ ಕಿರುಚಿತ್ರ ಸ್ಪರ್ಧೆಯನ್ನು ಅನ್ವೇಷಿಸಿದೆ.

————————————————————————————————————————————————

ಏನಿದು ನಾಳೆಯ ನಿರ್ದೇಶಕರು..?

               ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಹವ್ಯಾಸಗಳಿರುತ್ತೆ. ಕೆಲವರ ಹವ್ಯಾಸಗಳು ವೈಯಕ್ತಿಕ ಸಂತೋಷಕ್ಕೆ, ಮತ್ತೆ ಕೆಲವರದ್ದು ಸಾಮಾಜಿಕ ಕಳಕಳಿಯಿಂದ. ಕ್ಯಾಮರಾ ಹಿಡಿದು ಏನ್ನೋ ಚಿತ್ರಗಳನ್ನು ತೆಗೆಯುವವರನ್ನು, ಯಾವುದೋ ದೃಶ್ಯಗಳನ್ನು ಸೆರೆಹಿಡಿಯುವವರನ್ನು ನೋಡಿರುತ್ತೇವೆ. ಆದ್ರೆ ಆ ಕ್ಷಣಕ್ಕೆ ಅವರು ಏನು ಮಾಡ್ತಿದ್ದಾರೆ ಅನ್ನೋದು ಯಾರಿಗೂ ಅರ್ಥವಾಗಲ್ಲ. ಆದ್ರೆ ಅಂಥವರೇ ಮುಂದೊಂದು ದಿನ ಊಹೆಗೂ ಸಿಗದಷ್ಟು ದೊಡ್ಡ ಪ್ರತಿಭೆಗಳಾಗಿ ಹೊರ ಹೊಮ್ಮುತ್ತಾರೆ. ಇಂಥವರಿಗೆ ವೇದಿಕೆಯೊಂದನ್ನು ಕಲ್ಪಿಸಿಕೊಡುವುದಕ್ಕಾಗಿಯೇ “ಆಯುಷ್ ಟಿವಿ” ನಾಳೆಯ ನಿರ್ದೇಶಕರು ಅನ್ನೋ ಕಿರುಚಿತ್ರ ಸ್ಪರ್ಧೆಯನ್ನು ಹುಟ್ಟುಹಾಕಿದೆ.           

            ಯೂಟ್ಯೂಬ್‌, ಫೇಸ್ ಬುಕ್‌ಗಳಲ್ಲಿ ನಾವು ಹಲವಾರು ಕಿರುಚಿತ್ರಗಳನ್ನು (SHORT MOVIE) ನೋಡಿರುತ್ತೇವೆ. ಪ್ರೇಮಕಥೆಗಳು, ಸಾಮಾಜಿಕ ಕಳಕಳಿ, ಬೀದಿಗೆ ಬಿದ್ದವರು, ಅನಾಥರು, ವೃದ್ದಾಶ್ರಮಗಳು, ದೆವ್ವ, ಮೂಡ ನಂಬಿಕೆ ಹೀಗೆ  ಹತ್ತು ಹಲವು ವಿಚಾರಗಳ ಬಗ್ಗೆ ತಮ್ಮದೇ ರೀತಿಯಲ್ಲಿ ಸ್ಕ್ರಿಪ್ಟ್ , ಮ್ಯೂಸಿಕ್, ಕ್ಯಾಮರ, ನಟನೆ ಸೇರಿದಂತೆ ನಿರ್ದೇಶನ ಎಲ್ಲವನ್ನು ಮಾಡಿ 10 ನಿಮಿಷ, 15 ನಿಮಿಷ, 20 ನಿಮಿಷ, 30 ನಿಮಿಷದ ಕಿರುಚಿತ್ರಗಳನ್ನು ತೆಗೆದಿರುತ್ತಾರೆ. ಆದ್ರೆ ಈ ಕಿರುಚಿತ್ರಗಳ ಪೈಕಿ ಕೆಲವೇ ಕೆಲವು ಚಿತ್ರಗಳು ಮಾತ್ರ ಜನರನ್ನು ತಲುಪುತ್ತವೆ. ಸಾಮಾಜಿಕ ಜಾಲ ತಾಣಗಳಲ್ಲಿ ಸದ್ದು ಮಾಡುತ್ತವೆ, ಪ್ರತೀತಿ ಜೊತೆಗೆ ಕೊಂಚ ಹಣವನ್ನು ಗಳಿಸಿಕೊಡುತ್ತದೆ. ಅದರಲ್ಲೂ ಕೆಲವರು ಇಂಥಾ ಕಿರುಚಿತ್ರಗಳಿಂದಲೇ ಹೆಸರು ಮಾಡಿ ಇಂದು ಬೆಳ್ಳಿತೆರೆಯ ನಿರ್ದೇಶಕರಾಗಿದ್ದಾರೆ. 

            ಆದ್ರೆ ವಿಭಿನ್ನವಾದ ಕಿರುಚಿತ್ರಗಳನ್ನು ತೆಗೆದರೂ ಅದೆಷ್ಟೋ ಕಿರುಚಿತ್ರ ನಿರ್ದೇಶಕರಿಗೆ ಇಂದಿಗೂ ಕನ್ನಡ ಚಿತ್ರರಂಗದಲ್ಲಿ  ಅವಕಾಶಗಳೇ ಸಿಕ್ಕಿಲ್ಲ. ಅಂಥಾ ಎಲೆಮರೆಯ ಕಾಯಿಗಳನ್ನು ಹೆಕ್ಕಿ ಕನ್ನಡ ಚಿತ್ರರಂಗಕ್ಕೆ ನೀಡುವ ದೊಡ್ಡ ಜವಾಬ್ದಾರಿಯನ್ನು ಆಯುಷ್ ಟಿವಿ ಇಂದು ನಿಭಾಯಿಸಲು ಮುಂದಾಗಿದೆ. ಇದು ಕನ್ನಡ ಮಾಧ್ಯಮ ಲೋಕದಲ್ಲೇ ಮೊಟ್ಟಮೊದಲು ಅನ್ನೋದೆ ನಿಜ್ಜಕು ಹೆಮ್ಮೆಯ ಸಂಗಿತಿ.

————————————————————————————————————————————————

 ಧೂಳ್ ಎಬ್ಬಿಸಲು ಬರ್ತಿದ್ದಾರೆ ನಾಳೆಯ ನಿರ್ದೇಶಕರು

ಒಂದಾ ಎರಡಾ….ನಿಮ್ಮ ಊಹೆಗೂ ನಿಲುಕದಷ್ಟು….ಕನ್ನಡ ಚಿತ್ರರಂಗಕ್ಕೆ ಕಳಶಪ್ರಾಯದಂತಿರುವ…ಎಲ್ಲಕ್ಕಿಂತ ಹೆಚ್ಚಾಗಿ ನಾವ್ಯಾರೂ ಊಹೆಮಾಡಿರದಷ್ಟು ಅದ್ಭುತ ಕಿರುಚಿತ್ರ ನಿರ್ದೇಶಕರನ್ನು ಇಂದು ಆಯುಷ್ ಟಿವಿ ಅನ್ವೇಷಣೆ ಮಾಡಿದೆ. ಕಿರುಚಿತ್ರಗಳನ್ನು ಈ ರೀತಿಯಲ್ಲೂ ತೆಗೆಯ ಬಹುದು ಅನ್ನೋದನ್ನ ಇಡೀ ದೇಶಕ್ಕೆ ತೋರಿಸಿಕೊಡುವಷ್ಟು ವಿಭಿನ್ನರೀತಿಯ ನಿರ್ದೇಶಕರು ಆಯುಷ್ ಟಿವಿಯ ಕಿರುಚಿತ್ರ ಸ್ಪರ್ಧೆಯಲ್ಲಿ ಅನ್ವೇಷಣೆಯಾಗಿದ್ದಾರೆ. ನಾಳೆ ಕನ್ನಡ ಚಿತ್ರರಂಗಕ್ಕೆ ಇವರೇ ದೊಡ್ಡ ನಿರ್ದೇಶಕರಾಗೋದ್ರಲ್ಲಿ ಎರಡು ಮಾತಿಲ್ಲ.

—————————————————————————————————————————————-

ನಾಳೆಯ ನಿರ್ದೇಶಕರು ಸ್ಪರ್ಧೆಯ ರೂಪುರೇಷೆಗಳು 

  1. ಕಿರುಚಿತ್ರ ಸ್ಪರ್ಧೆಗಾಗಿ ಆಯುಷ್ ಟಿವಿ ಎರಡು ತಿಂಗಳ ಹಿಂದೆ ನಾಳೆಯ ನಿರ್ದೇಶಕರು ಎಂಬ ಶೀರ್ಷಿಕೆ ಅಡಿ ರಾಜ್ಯದ ಕಿರುಚಿತ್ರ ನಿರ್ದೇಶಕರಿಗೆ ತಾವುಗಳು ನಿರ್ದೇಶಿಸಿರುವ ಕಿರು ಚಿತ್ರಗಳನ್ನು ಕಳುಹಿಸಿಕೊಡುವಂತೆ ಆಹ್ವಾನ ನೀಡಿತ್ತು.
  2. ಯೂಟ್ಯೂಬ್ ಹಾಗೂ ಫೇಸ್ ಬುಕ್ ಸೇರಿದಂತೆ ಯಾವುದೇ ಅಂತರ್ಜಾಲದಲ್ಲಿ ಈಗಾಗಲೇ ಪ್ರಸಾರವಾಗಿರದ ಹಾಗೂ ಯಾವುದೇ ಸ್ಪರ್ಧೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಪ್ರಸಾರವಾಗಿರದ ಕಿರುಚಿತ್ರಗಳಿಗೆ ಮಾತ್ರ ಆಹ್ವಾನ ನೀಡಲಾಗಿತ್ತು
  3. ಕಿರುಚಿತ್ರ ಸ್ಪರ್ಧೆ ಆಹ್ವಾನಕ್ಕೆ ಅಭೂತಪೂರ್ವವಾದ ಸ್ಪಂದನೆ ಸಿಕ್ಕಿ ಒಟ್ಟು 584 ಕಿರುಚಿತ್ರಗಳ ಸಿಡಿ ಆಯುಷ್ ಟಿವಿ ಕಛೇರಿಗೆ ಬಂದಿದ್ದವು.
  4. ಬಂದಿದ್ದ 584 ಕಿರುಚಿತ್ರಗಳ ಪೈಕಿ ಪ್ರಸಾರಕ್ಕೆ ಯೋಗ್ಯವಾದ 100 ಚಿತ್ರಗಳನ್ನು ಮೊದಲಿಗೆ ಆಯ್ಕೆಮಾಡಿಕೊಳ್ಳಲಾಯಿತು.
  5. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಾದ ಶ್ರಿ ಬಿ. ರಾಮಮೂರ್ತಿ ಅವರ ನೇತೃತ್ವದಲ್ಲಿ ಉತ್ತಮ ಚಿತ್ರಗಳನ್ನು ಆಯ್ಕೆಮಾಡಿ ಚಿತ್ರಗಳ ಗುಣಮಟ್ಟದ ಆಧಾರದ ಮೇಲೆ ಅಂಕಗಳನ್ನು ನೀಡಲಾಗಿದೆ. 

—————————————————————————————————————————————-

ನಾಳೆಯ ನಿರ್ದೇಶಕರು ಕಿರುಚಿತ್ರದ ಪ್ರಸಾರ ಹೇಗೆ..?

ನಾಳೆಯ ನಿರ್ದೇಶಕರು ಕಿರುಚಿತ್ರ ಸ್ಪರ್ಧೆಯಲ್ಲಿ ಈಗಾಗಲೇ ಆಯ್ಕೆಯಾಗಿರುವ ಚಿತ್ರಗಳನ್ನು ಇದೇ ಜೂನ್ 3ನೇ ತಾರೀಖು ಭಾನುವಾರದಿಂದ ಮಧ್ಯಾಹ್ನ 11 ಗಂಟೆಗೆ ಪ್ರಸಾರ ಮಾಡಲಾಗವುದು. ಮರುಪ್ರಸಾರವನ್ನು ರಾತ್ರಿ 9 ಗಂಟೆಗೆ ನಿಮ್ಮ ಆಯುಷ್ ಟಿವಿಯಲ್ಲಿ ಪ್ರಸಾರ ಮಾಡಲಾಗುವುದು. ಜೂನ್ 3 ರಿಂದ ಪ್ರತೀ ಭಾನುವಾರ ಆಯ್ಕೆಗೊಂಡ ಎಲ್ಲಾ ಚಿತ್ರಗಳು ಆಯುಷ್ ಟಿವಿಯಲ್ಲಿ ಪ್ರಸಾರವಾಗಲಿದೆ.

60 ನಿಮಿಷದ ಒಟ್ಟು 50 ಎಪಿಸೋಡ್‌ಗಳು ಆಯುಷ್ ಟಿವಿಯಲ್ಲಿ ಜೂನ್ 3 ರಿಂದ ಪ್ರಸಾರವಾಗಲಿದೆ.

—————————————————————————————————————————————-

ರಾಜ್ಯದ ಪ್ರತಿಯೊಬ್ಬ ಚಿತ್ರರಸಿಕನೂ ತೀರ್ಪುಗಾರ

ನಾಳೆಯ ನಿರ್ದೇಶಕರು ಸ್ಪರ್ಧೆಯ ವಿಶೇಷ ಏನಂದರೆ… ರಾಜ್ಯದ ಪ್ರತಿಯೊಬ್ಬ ಚಿತ್ರರಸಿಕರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಆಯುಷ್ ಟಿವಿಯಲ್ಲಿ ಪ್ರಸಾರವಾದ ಕಿರುಚಿತ್ರವನ್ನು ರಾಜ್ಯದ ಜನತೆ ಇಷ್ಟಪಟ್ಟಲ್ಲಿ ಚಿತ್ರಕ್ಕೆ ಅಂಕಗಳನ್ನು ನೀಡಬಹುದು.

ಆಯುಷ್ ಟಿವಿಯಲ್ಲಿ ಕಿರುಚಿತ್ರ ಪ್ರಸಾರವಾದ ನಂತರ ಅದನ್ನು ಆಯುಷ್ ಟಿವಿಯ ಯೂಟ್ಯೂಬ್ (YouTube) ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗುವುದು. ಯೂ ಟ್ಯೂಬ್‌ನಲ್ಲಿ ಚಿತ್ರ ಇಷ್ಟವಾದಲ್ಲಿ ಲೈಕ್ ಬಟನ್ ಒತ್ತಿದರೆ ಆ ಚಿತ್ರಕ್ಕೆ ಅಂಕ ಸೇರ್ಪಡೆಯಾಗುತ್ತೆ.

ಅದೇ ರೀತಿ ಫೇಸ್ ಬುಕ್‌ನಲ್ಲಿಯೂ (FACE BOOK) ಚಿತ್ರಕ್ಕೆ ಲೈಕ್, ಶೇರ್ ಬಟನ್‌ಗಳನ್ನು ಒತ್ತಿದರೆ ಅಲ್ಲಿಯೂ ಕೂಡ ಚಿತ್ರಕ್ಕೆ ಅಂಕಗಳು ಸೇರ್ಪಡೆಯಾಗಲಿದೆ.

ಚಿತ್ರಕ್ಕೆ ತೀರ್ಪುಗಾರರು ನೀಡಿದ ಅಂಕದೊಂದಿಗೆ ಜನರು ಫೇಸ್ ಬುಕ್ ಹಾಗೂ ಯೂ ಟ್ಯೂಬ್‌ನಲ್ಲಿ ನೀಡಿದ ಅಂಕಗಳನ್ನು ಸೇರಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಘೋಷಣೆ ಮಾಡಲಾಗುವುದು.

 —————————————————————————————————————————————

14 ವಿಭಾಗಗಳಲ್ಲಿ ಸಿಗಲಿದೆ ಪ್ರಶಸ್ತಿ

ನಾಳೆಯ ನಿರ್ದೇಶಕರು ಕಿರುಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ ಅತೀ ಹೆಚ್ಚು ಅಂಕ ಪಡೆದ ಮೂರು ಚಿತ್ರಗಳಿಗೆ ಪ್ರಥಮ, ದ್ವಿತೀಯ, ಹಾಗೂ ತೃತೀಯ ಸ್ಥಾನಗಳನ್ನು ನೀಡಲಾಗುವುದು. ಕೇವಲ ಈ ಮೂರು ಪ್ರಶಸ್ತಿಗಳು ಮಾತ್ರವಲ್ಲದೆ ಒಟ್ಟು 14 ವಿಭಾಗಗಳಲ್ಲಿ ವಿಶೇಷ ಬಹುಮಾನಗಳನ್ನು ನೀಡಲಾಗುತ್ತದೆ.

ವಾಹಿನಿಯಲ್ಲಿ ಪ್ರಸಾರವಾಗುವ 100 ಚಿತ್ರಗಳನ್ನು ಕನ್ನಡ ಚಿತ್ರರಂಗದ ನುರಿತ ಹಿರಿಯ ತಂತ್ರಜ್ಞರು ಹಾಗೂ ನಿರ್ದೇಶಕರು ಪರಿಶೀಲಿಸಿ 14 ಪ್ರಶಸ್ತಿಗಳಿಗೆ ಆಯ್ಕೆ ಮಾಡಲಿದ್ದಾರೆ. 

ಕ್ರ ಸಂ ವಿಭಾಗಗಳು ಕ್ರ ಸಂ ವಿಭಾಗಗಳು
01 ಉತ್ತಮ ನಿರ್ದೇಶಕರು 08 ಉತ್ತಮ ಪೋಷಕ ನಟಿ
02 ಉತ್ತಮ ನಾಯಕ ನಟ 09 ಉತ್ತಮ ಛಾಯಾಗ್ರಾಹಕ
03 ಉತ್ತಮ ನಾಯಕ ನಟಿ 10 ಉತ್ತಮ ನಿರೂಪಣೆ
04 ಉತ್ತಮ ಸಂಗೀತ ನಿರ್ದೇಶಕ 11 ಉತ್ತಮ ಕಥೆ
05 ಉತ್ತಮ ಗಾಯಕ 12 ಉತ್ತಮ ಹಾಸ್ಯ ಚಿತ್ರ
06 ಉತ್ತಮ ಚಿತ್ರಕಥೆ 13 ಉತ್ತಮ ಸಂಕಲನ
07 ಉತ್ತಮ ಪೋಷಕ ನಟ 14 ಉತ್ತಮ ಸಂಭಾಷಣೆ

 

Ayush TV

Ayush Tv- World's First Health, Wellness, Lifestyle and Infotainment Channel