Blogs

Ayush admin | Jan 13, 2021 | 404

ನಿಮ್ಮ ಸೌಂದರ್ಯ ನಿಮ್ಮ ಕೈಯಲ್ಲಿ…

ಮನುಷ್ಯನಿಗೆ ಪ್ರಕೃತಿಯನ್ನು ದೇವರು ಹೇಗೆ ವರವಾಗಿ ಕೊಟ್ಟಿದ್ದಾನೋ, ಹಾಗೇ ಪ್ರತೀ ಮನುಷ್ಯನಿಗೆ ಸೌಂದರ್ಯವನ್ನು ಕೂಡ ವರದಾನವಾಗಿ ಕೊಟ್ಟಿದ್ದಾನೆ. ಸೌಂದರ್ಯದಲ್ಲಿ ನಾವು ಪ್ರಮುಖವಾಗಿ ಬಾಹ್ಯ ಸೌಂದರ್ಯ ಹಾಗೂ ಆಂತರಿಕ ಸೌಂದರ್ಯ ಎನ್ನುವ ಎರಡು ವಿಧವನ್ನು ಗುರುತಿಸಬಹುದು.

ಈ ಆಂತರಿಕ ಸೌಂದರ್ಯ ಎನ್ನುವಂತಹದ್ದು ನಮ್ಮ ಅಂತರಾಳದ ಸೌಂದರ್ಯ, ಎಂದರೆ ನಮ್ಮ ಒಳ್ಳೆಯ ಮನಸ್ಸು, ಕಷ್ಟ ಎಂದಾಗ ಸಹಾಯಕ್ಕೆ ಬರುವ ಗುಣ, ಮಾನವೀಯತೆ ಆದರೆ ಬಾಹ್ಯ ಸೌಂದರ್ಯವೆಂದರೆ ನಮ್ಮ ದೇಹದಲ್ಲಿನ ಚರ್ಮದ ಬಣ್ಣ. ಈ ಆಧುನಿಕ ಜಗತ್ತಿನಲ್ಲಿ ಒಬ್ಬರಿಗಿಂತ ಒಬ್ಬರು ಸುಂದರವಾಗಿ ಕಾಣಬೇಕು ಅನ್ನೋ ಹುಮ್ಮಸ್ಸಿನಿಂದ ಮಾಡರ್ನ್ ಪಾರ್ಲರ್, ಮಾರ್ಕೆಟ್‍ಗಳಲ್ಲಿ ಥಟ್ ಅಂತ ಸಿಗುವ ಕೆಮಿಕಲ್ ಬಳಸಿರುವ ಸೌಂದರ್ಯವರ್ಧಕಗಳ ಮೊರೆ ಹೋಗ್ತಾರೆ.

ಇದರಲ್ಲಿ ನಮ್ಮದೇನು ತಪ್ಪಿಲ್ಲ ಬಿಡಿ…ಯಾಕೆಂದರೆ ನಮಗೆ ಮನೆಯಲ್ಲೇ ಸಿಗುವ, ಯಾವುದೇ ಅಡ್ಡ ಪರಿಣಾಮವಿಲ್ಲದ ಸೌಂದರ್ಯವರ್ಧಕಗಳನ್ನು ಉಪಯೋಗಿಸಲು ಸಮಯ ತಾನೇ ಎಲ್ಲಿರುತ್ತೆ ಅಲ್ವಾ..? ನಾವೀವಾಗ ತುಂಬಾ ಬ್ಯುಸಿ, ಊಟ ಮಾಡೋದಕ್ಕೆ ಟೈಮ್ ಇರಲ್ಲ, ಅಂತದ್ರಲ್ಲಿ ಅಜ್ಜಿ ಕಾಲದ ಗಂಧ, ಗಿಡಮೂಲಿಕೆ ಸೊಪ್ಪು, ಅರಶಿಣ ಇವೆಲ್ಲವನ್ನ ಮುಖಕ್ಕೆ ಹಚ್ಚಲು ಸಮಯ ತಾನೇ ಎಲ್ಲಿರುತ್ತೆ.

ಕೆಮಿಕಲ್ ಉಪಯೋಗಿಸಿ ತಯಾರಿಸಿದ ಸೌಂದರ್ಯವರ್ಧಕಗಳ ಬಳಕೆಯಿಂದಾದ ಅನಾಹುತಗಳನ್ನು ಟಿವಿಯಲ್ಲಿ, ಪೇಪರ್‍ಗಳಲ್ಲಿ ನಾವು ನೋಡ್ತಾನೇ ಇರ್ತೇವೆ, ಎತ್ತು ಏರಿಗಿಳಿತು ಕೋಣ ನೀರಿಗಿಳಿತು ಅನ್ನೋ ಹಾಗೇ ಇಷ್ಟಾದ್ರು ನಮಗೆ ಬುದ್ಧಿನೇ ಬಂದಿಲ್ಲ. ಇನ್ನೂ ಮುಂದಾದ್ರು ರಾಸಾಯನಿಕ ಸೌಂದರ್ಯವರ್ಧಕಗಳನ್ನ ಉಪಯೋಗಿಸದೇ ಮನೆಯಲ್ಲೇ ಸುಲಭವಾಗಿ ಸಿಗುವ, ಯಾವುದೇ ಅಡ್ಡ ಪರಿಣಾಮವಿಲ್ಲದ ಸಾಮಾಗ್ರಿಗಳಿಂದ ನಿಮ್ಮ ಸೌಂದರ್ಯವನ್ನ ಹೆಚ್ಚಿಸಿಕೊಳ್ಳಿ. ಏನಪ್ಪಾ ಇದು ಅವಾಗ್ಲಿಂದ ಅಡ್ಡ ಪರಿಣಾಮವಿಲ್ಲದ, ರಾಸಾಯನಿಕವಿಲ್ಲದ ಸೌಂದರ್ಯವರ್ಧಕ ಅಂತಿದ್ದಾರಲ್ಲಾ..ಅಂತ ತುಂಬಾ ಯೋಚನೆ ಮಾಡ್ಬೇಡಿ. ನಿಮ್ಮ ಸೌಂದರ್ಯವನ್ನ ಹೆಚ್ಚಿಸಿಕೊಳ್ಳುವ ಗುಟ್ಟು ಇಲ್ಲಿದೆ ನೋಡಿ…


ನಿಂಬೆ ಹಣ್ಣು ಮತ್ತು ಸಕ್ಕರೆಯ ಮಹತ್ವ ನಿಮಗೆಲ್ಲಾ ಗೊತ್ತೇ ಇರಬಹುದು..ನಿಂಬೆ ಹಣ್ಣು ಮತ್ತು ಸಕ್ಕರೆಯ ಬಗ್ಗೆ ಹೇಳಿದ ತಕ್ಷಣ ಸಿಹಿಯೊಂದಿಗೆ ಹುಳಿ ನೀಡುವ ನಿಂಬು ಜ್ಯೂಸ್ ನೆನಪಾಗಿರಬೇಕಲ್ವಾ..? ನಾನೀವಾಗ ನಿಮಗೆ ಜ್ಯೂಸ್ ಬಗ್ಗೆ ಹೇಳ್ತಾಯಿಲ್ಲ, ಬಾಯಲ್ಲಿ ನೀರುರಿಸೋ ಈ ನಿಂಬೆ ಹಣ್ಣು ಮೂಲತಃ ಏಷ್ಯಾದ ಒಂದು ತಳಿ. ಇದರಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿರುವುದರಿಂದ ನೈಸರ್ಗಿಕವಾಗಿ ಇದು ತ್ವಚೆಯನ್ನು ಬ್ಲೀಚ್ ಮಾಡಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ.

ನಿಂಬೆಯಂತೆಯೇ ಸಕ್ಕರೆಯೂ ಕೂಡ ಬಹುಪಕಾರಿ ಗುಣವುಳ್ಳದ್ದು. ಸಕ್ಕರೆಯಲ್ಲಿ ನೈಸರ್ಗಿಕವಾದ ಎಕ್ಸೋಪೋಲಿಯೇಟ್ ಇರುವುದರಿಂದ ನಿಂಬೆಯ ಜೊತೆ ಸಕ್ಕರೆಯನ್ನು ಕೂಡ ತ್ವಚೆಗೆ ಹಚ್ಚಬಹುದು. ಹೇಗೆ ಎರಡನ್ನೂ ಕೂಡ ಹಚ್ಚುವುದು ಎಂದು ಯೋಚಿಸುತ್ತಿದ್ದೀರಾ..? ಸ್ನಾನ ಮಾಡುವ

 

ಮೊದಲು ನಿಂಬೆ ಮತ್ತು ಸಕ್ಕರೆಯ ಮಿಶ್ರಣವನ್ನು ತ್ವಚೆಗೆ ಚೆನ್ನಾಗಿ ಉಜ್ಜಿ ನಂತರ ಸ್ನಾನ ಮಾಡುವುದರಿಂದ ತ್ವಚೆಯ ಬಣ್ಣ ಬದಲಾಗುವುದು. ಹೀಗೇ ಒಂದೆರೆಡು ದಿನಗಳ ಕಾಲ ಮಾಡುವುದರಿಂದ ಏನು ಉಪಯೋಗವಾಗುವುದಿಲ್ಲ ಸರಿಸುಮಾರು ಹತ್ತು ದಿನಗಳ ಕಾಲವಾದರೂ ಈ ಸೌಂದರ್ಯದ ಗುಟ್ಟನ್ನು ಅನುಸರಿಸುವುದರಿಂದ ಸುಂದರವಾದ, ಪಳಪಳನೆ ಹೊಳೆಯುವ ತ್ವಚೆ ನಿಮ್ಮದಾಗಬಹುದು.

ನೋಡಿದ್ರಲ್ವಾ ನಿಂಬೆ ಹಣ್ಣು ಹಾಗೂ ಸಕ್ಕರೆ ಕೇವಲ ನಮ್ಮ ದಾಹವನ್ನು ನೀಗಿಸಿ, ದೇಹಕ್ಕೆ ಶಕ್ತಿ ನೀಡುವುದಲ್ಲದೆ ನಮ್ಮ ಸೌಂದರ್ಯವನ್ನ ಕೂಡ ಹೇಗೇ ಹೆಚ್ಚಿಸುತ್ತದೆ ಎಂದು. ನಿರಂತರವಾಗಿ 10 ದಿನಗಳ ಕಾಲ ನಿಂಬೆ ಹಣ್ಣಿನ ಹಾಗೂ ಸಕ್ಕರೆಯ ಮಿಶ್ರಣವನ್ನು ತ್ವಚೆಗೆ ಬಳಸಿ ಸೌಂದರ್ಯದಲ್ಲಾದ ನೈಸರ್ಗಿಕ ಬದಲಾವಣೆಯನ್ನ ನೀವೇ ನೋಡಿ.

Ayush TV

Ayush Tv- World's First Health, Wellness, Lifestyle and Infotainment Channel