admin | Feb 23, 2023 | 137
ಅಡುಗೆಮನೆಯ ಕೆಲಸದಲ್ಲಿ ಮಗ್ನಳಾಗಿದ್ದ ಪತ್ನಿ ಜೋರಾಗಿ ಹೇಳುವುದನ್ನು ಕೇಳಿ ನಾನು ಎಚ್ಚರಗೊಂಡೆ.
"ಇದೆಂಥ ನಿದ್ರೆ, ಸಮಯ ಎಷ್ಟಾಯ್ತು ಎಂದು ತಿಳಿಯಿತಾ? ಇಂದು ಆಫಿಸ್ ಗೆ ಹೋಗಲಿಕ್ಕಿಲ್ಲವೆ....?"
ಅದನ್ನು ಕೇಳಿ ನಾನು ಜಿಗಿದು ಎದ್ದೇಳಲು ಪ್ರಯತ್ನಿಸಿದೆ.
ಆದರೆ ನನ್ನ ಕೈಕಾಲುಗಳು ಚಲಿಸುತ್ತಿಲ್ಲ.
ನಾನು ಮತ್ತೆ ಪ್ರಯತ್ನಿಸಿದೆ. ಆದರೆ ಆಗುತ್ತಿಲ್ಲ.
ನಾನು ಮತ್ತೆ ಮತ್ತೆ ಪ್ರಯತ್ನಿಸಿದೆ. ಆದರೆ ಆಗುತ್ತಲೇ ಇಲ್ಲ.
ನಾನು ಜೋರಾಗಿ ಬೊಬ್ಬೆ ಹೊಡೆದೆ.
"ನನ್ನ ಕೈಕಾಲುಗಳು ಚಲಿಸುತ್ತಿಲ್ಲ"
ನಾನು ರೋದಿಸಿದೆ, ಅತ್ತು ಬಿಟ್ಟೆ.
ಯಾರೂ ಕೇಳುತ್ತಿಲ್ಲ. ಒಂದಷ್ಟು ಹೊತ್ತು ಅಲ್ಲೇ ಹಾಗೆ ಮಲಗಿದೆ. ಯಾರೂ ಕೇಳುತ್ತಿಲ್ಲ.
ಸ್ವಲ್ಪ ಹೊತ್ತು ಕಳೆದಾಗ; ಪತ್ನಿ ಅವಸರವಸರವಾಗಿ ಬಂದು, ನನ್ನ ಕರೆದಳು. ನನ್ನ ದೇಹ ಚಲನೆ ಕಾಣದಾದಾಗ, ತನ್ನ ಮುಟ್ಟಿ ಕರೆದಳು, ಆದರೂ ನಾನು ರೋಧಿಸುತ್ತಿರುವುದು ಅವಳಿಗೆ ಕಾಣುತ್ತಲೇ ಇಲ್ಲ.
ನಂತರ ಆಕೆ ಗೋಗರೆದು ನನ್ನನ್ನು ಅಲುಗಾಡಿಸಿ ಕರೆಯಲಾರಂಭಿಸಿದಳು.
ಆಕೆಯ ರೋದನೆ ಕೇಳಿದ ನೆರೆಹೊರೆಯವರೆಲ್ಲ ಓಡಿ ಬರುತ್ತಿರುವುದನ್ನು ನಾನು ನೋಡುತ್ತಿದ್ದೇನೆ.
ಅವರೊಂದಿಗೆ ಪತ್ನಿ ರೋದಿಸಿ ಗೋಗರೆಯಲಾರಂಭಿಸಿದಳು; 'ನಿದ್ರೆಯಿಂದ ಎಬ್ಬಿಸಿದಾಗ ಎಚ್ಚರಗೊಳ್ಳುತ್ತಿಲ್ಲ'!
ನಾನು ಬೊಬ್ಬಿಟ್ಟು ಹೇಳಲು ಯತ್ನಿಸಿದೆ;
'ನನಗೇನೂ ಆಗಿಲ್ಲ. ಕೈಕಾಲುಗಳು ಮಾತ್ರ ಅಲುಗಾಡಿಸಲಾಗುತ್ತಿಲ್ಲವಷ್ಟೇ'
ಆದರೆ ನನ್ನ ಮಾತು ಅವರಾರಿಗೂ ಕೇಳುತ್ತಿಲ್ಲ.
ಎಲ್ಲರೂ ನನ್ನನ್ನು ದಯನೀಯವಾಗಿ ನೋಡುತ್ತಿದ್ದಾರೆ.
ಅವರೆಲ್ಲರ ಮಧ್ಯೆ ನನ್ನ ಪುತ್ರಿ, ಪತ್ನಿಯರು ರೋದಿಸುತ್ತಿದ್ದಾರೆ.
ಸ್ವಲ್ಪ ಸಮಯದಲ್ಲೇ ನನ್ನ ಮನೆಗೆ ಹಲವರು ಬಂದು ಸೇರಿದರು.
ಅವರಲ್ಲಿ ಕೆಲವರು ಹತ್ತಿರದಲ್ಲಿದ್ದವರೊಂದಿಗೆ ಕೇಳುವುದನ್ನು ನಾನು ಆಲಿಸಿದೆ.
"ಯಾವಾಗ ಸಾವು ಸಂಭವಿಸಿತು ?"
ಯಾರೋ ನನ್ನನ್ನು ಬಿಳಿ ವಸ್ತ್ರದಿಂದ ಮುಚ್ಚಿದರು.
ನಾನವರೊಂದಿಗೆ ಬೊಬ್ಬಿಟ್ಟು ಹೇಳಿದೆ;
"ನಾನು ಮರಣಹೊಂದಿಲ್ಲ"
ಆದರೆ ಯಾರೂ ಅದನ್ನು ಆಲಿಸಲೇ ಇಲ್ಲ.
ನನ್ನ ಗೆಳೆಯರು, ಸಂಬಂಧಿಕರೆಲ್ಲರೂ ತಂಡೋಪತಂಡವಾಗಿ ನನ್ನ ಮನೆಗೆ ಬರಲಾರಂಭಿಸಿದರು.
ನಾನು ಅವರ ಬಳಿಗೊಮ್ಮೆ ಹೋಗಬೇಂದು ಯೋಚಿಸಿದ್ದೆ. ಏನೆಲ್ಲಾ ನಿಬಿಡತೆಯ ಕಾರಣದಿಂದ ಹೋಗಲಾಗಿರಲಿಲ್ಲ.
ಈಗ ಅವರೆಲ್ಲ ನನ್ನನ್ನು ನೋಡಲೆಂದು ಅವರ ಅನಾರೋಗ್ಯವನ್ನೂ ಲೆಕ್ಕಿಸದೇ ಇಲ್ಲಿಗೆ ಬಂದಿದ್ದಾರೆ.
ಇದರ ಮಧ್ಯೆ ಇನ್ನೊಂದು ವಿಷಯ ನಾನು ಗಮನಿಸಿದೆ.
ನನ್ನ ಮನೆಯ ಪಕ್ಕದ ವ್ಯಾಪಾರಿ.
ಪ್ರತಿದಿನ ಆಫೀಸ್ ಗೆ ಮನೆಯಿಂದ ಹೋಗುವಾಗ, ಆಫೀಸ್ ನಿಂದ ಮನೆಗೆ ಮರಳುವಾಗ ಆತ ನನ್ನನ್ನು ನೋಡುವುದನ್ನು ಗಮನಿಸಿಯೂ ನಾನು ನೋಡದಂತೆ ನಟಿಸುತ್ತಿದ್ದೆ.
ಒಂದು ಬಾರಿಯೂ ಮಾತನಾಡಿಸಲು ಹೋಗಿಲ್ಲ ನಾನು.
ಆತನು ಇಂದು ನನ್ನನ್ನು ನೋಡಲು ಬಂದ.
ಅದೇರೀತಿ ಮತ್ತೊಬ್ಬ ನನ್ನ ನೆರೆಮನೆಯಾತ.
ಕಳೆದ ವಾರ ಆತ ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ವಿಷಯ ನನ್ನ ಪತ್ನಿ ಹೇಳಿದ್ದಳು. ಆತನ ಮನೆಗೆ ಹೋಗಿ ಆತನನ್ನು ಸಂದರ್ಶಿಸಲು ನನಗೆ ಬಿಡುವು ಇರಲಿಲ್ಲ.
ಆತನೂ ಇಂದು ಆಫೀಸಿಗೆ ರಜೆ ಹಾಕಿ ನನ್ನನ್ನು ನೋಡಲು ಬಳಿ ಬಂದು ನಿಂತಿದ್ದಾನೆ.
ಒಬ್ಬೊಬ್ಬರಾಗಿ ನೋಡುವಾಗ ನಾನದನ್ನು ಗಮನಿಸಿದೆ.
ಕೋಣೆಯ ಮೂಲೆಯಲ್ಲಿ ನಿಂತು ನನ್ನ ಆಪ್ತ ಗೆಳೆಯ ಬಿಕ್ಕಳಿಸುತ್ತಿದ್ದಾನೆ.
ನನ್ನ ಅತ್ಯಾಪ್ತನಾಗಿದ್ದ ಆತನೊಂದಿಗೆ ಕೋಪಿಸಿ ಮಾತು ಬಿಟ್ಟು ಮೂರು ವರ್ಷವಾಯ್ತು.
ಎಷ್ಟೋ ಬಾರಿ ಆತ ನನ್ನೊಂದಿಗೆ ಮಾತನಾಡಲು ಪ್ರಯತ್ನಿಸಿದಾಗೆಲ್ಲಾ ನಾನೇ ಮುಖ ತಿರುಗಿಸಿದ್ದೆ.
ಅವನೂ ಇಂದು ನನ್ನನ್ನು ನೋಡಿ ಅಳುತ್ತಿದ್ದಾನೆ. ಅವನೊಂದಿಗೆ ಮಾತನಾಡಬೇಕೆನಿಸಿತು.
ನಾನು ಅವನನ್ನು ಬೊಬ್ಬಿಟ್ಟು ಕರೆದೆ.
ಆದರೆ ಆತನಿಗೂ ಕೇಳಿಸುತ್ತಿಲ್ಲ.
ತಕ್ಷಣ ನನ್ನ ತಲೆ ಮೇಲಿನ ಫ್ಯಾನ್ ನಿಂತು ಬಿಟ್ಟಿತು.
ಕೋಣೆ ಪೂರ್ತಿ ಕತ್ತಲಾಯ್ತು.
ಯಾರೋ ಹೇಳಿದ್ದು ಕೇಳಿಸಿತು; ಕರೆಂಟ್ ಹೋಯ್ತೆಂದು.
ಯಾರೋ ಎಮರ್ಜೆನ್ಸಿ ಹೊತ್ತಿಸಿದ್ದು, ಮತ್ತು ಪತ್ನಿ ಬೊಬ್ಬಿಟ್ಟು ಕರೆದದ್ದು ಏಕಕಾಲಕ್ಕಾಗಿತ್ತು.
"ಇದೆಂಥ ನಿದ್ರೆ; ಇಂದು ಆಫೀಸ್ ಗೆ ಹೋಗೋದಿಲ್ವೆ?"
ನಾನು ಜಿಗಿದು ಎದ್ದೆ. ಬೆವರಲ್ಲಿ ಮಿಂದಿದ್ದೇನೆ.
ನಾನು ಕನಸಿನಿಂದೆ ಹೊರ ಬಂದು ನಿದ್ರೆ ಯಿಂದ ಎಚ್ಚೆತ್ತೆ!
ಅದೇ...
ಎಲ್ಲ ಒಂದು ಕನಸಾಗಿತ್ತು.
ನನ್ನ ಗಾಬರಿಯನ್ನು ಗಮನಿಸಿದ ಪತ್ನಿ
ಪ್ರಶ್ನಿಸಲಾರಂಭಿಸಿದಳು.
ನಾನು ಹೇಳಿದೆ;
"ಇಲ್ಲ. ಇಂದು ಆಫೀಸ್ ಗೆ ಹೋಗೋದಿಲ್ಲ.
ನೀ ಹೇಳಿದ, ಸಂಬಂಧಿಕರನ್ನೆಲ್ಲಾ ಇಂದೇ ನೋಡಲು ಹೋಗೋಣ. ಬರುವ ದಾರಿಯಲ್ಲಿ ನನ್ನ ಗೆಳೆಯನ ಮನೆಗೂ ಹೋಗಬೇಕು...."
ನೆನಪಿಡಿ, ಮರಣವು ಕೂಗಳತೆಯಲ್ಲೇ ಇದೆ.
ಯಾವ ಕ್ಷಣ.. ಇದೇ ರೀತಿಯ ಅನುಭವ ಪ್ರತಿಯೊಬ್ಬರಿಗೂ ಉಂಟಾಗಲಿಕ್ಕಿದೆ.
ಸತ್ಕರ್ಮಗಳನ್ನು ಮಾಡೋಣ.
ಕುಟುಂಬ ಸಂಬಂಧ ಗಟ್ಟಿಗೊಳಿಸೋಣ.
ಎಲ್ಲರೊಂದಿಗೂ ಪ್ರೀತಿಪೂರ್ವಕ ವರ್ತಿಸೋಣ.
ಹಗೆತನ, ವೈಷಮ್ಯ, ಅಸೂಯೆ, ಅಹಂಕಾರಗಳನ್ನು ಮನಸಿನಲ್ಲಿಟ್ಟುಕೊಳ್ಳದಿರೋಣ.
ಕೋಪಗೊಂಡು ಅಗಲಿದ ಸಂಬಂಧಗಳನ್ನು ಮರುಜೋಡಿಸೋಣ.
ನಾವು ಹತ್ತಿರಗೊಳಿಸಬೇಕಾದ ಒಬ್ಬರೂ ಏಕಾಂಗಿಯಾಗಿ ಅಳುವಂತಾಗಬಾರದು...
ಹಾಗಾದರೆ, ಯಾವುದೇ ಕ್ಷಣ ಸಂತೋಷ ಸಮಾಧಾನಗಳು ತುಂಬಿದ ಮನಸಿನೊಂದಿಗೆ ನಮಗೆ ಒಂದು ದಿನ ಈ ಲೋಕದೊಂದಿಗೆ ವಿದಾಯ ಹೇಳಲು ಸಾಧ್ಯ.
ಪ್ರಾರ್ಥನೆಗಳೊಂದಿಗೆ.
ಓದಿದಾಗ ಇಷ್ಟವಾಯ್ತು.
ಕೃಪೆ: ವಾಟ್ಸಪ್