Ayush admin | Nov 24, 2020 | 397
Belaku – ಬೆಳಕು | Social |Ayush Short Movie Awards
Belaku
This movie depicts how to throw light on those who have lost their eye sight. This heart warming story gives the message, that although the blind cannot see the nature, they have to be shown humanity and include them in our mainstream.
This short movie carries a very good social message that we have to take them to the path of light at a time when their life is under darkness.
ಬೆಳಕು
ಕಣ್ಣಿದ್ದರೂ ದ್ರಷ್ಟಿಯನ್ನು ಕಳೆದುಕೊಂಡು ಪ್ರಪಂಚವನ್ನು ನೋಡಲು ಆಗದೇ ಬೇಸತ್ತಿರುವ ಜೀವಗಳು ಹಲವಾರು. ದ್ರಷ್ಟಿ ಕಳೆದುಕೊಂಡು ಬೆಳಕನ್ನೇ ಕಾಣದ ಅಂಧರು ಪ್ರಪಂಚವನ್ನು ಕಾಣುವ ಕಾತುರತೆಯಲ್ಲಿ ಕಾದು ಕುಳಿತಿದ್ದಾರೆ. ದ್ರಷ್ಟಿ ಕಳೆದುಕೊಂಡಿದ್ದರೂ ಅವರ ಬಾಳಿನಲ್ಲಿ ಬೆಳಕನ್ನು ಚೆಲ್ಲುವುದು ಹೇಗೆ ಎನ್ನುವ ಹೃದಯ ಸ್ಪರ್ಶಿ ಕಥೆಯೇ ಈ ಬೆಳಕು ಚಿತ್ರ.
ಪ್ರತಿಯೊಬ್ಬರಿಗೂ ತಮ್ಮ ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಾ ನೋಡಿ ಸವಿಯಬೇಕೆನ್ನುವ ಆಸೆ ಇದ್ದೇ ಇರುತ್ತದೆ. ಆದರೆ ಸೃಷ್ಟಿಯ ನಿಯಮದಿಂದಾಗಿ ಹುಟ್ಟುವಾಗಲೇ ಕೆಲವರು ತಮ್ಮ ದ್ರಷ್ಟಿಯನ್ನು ಕಳೆದುಕೊಂಡು ಅಂಧರಾಗಿಯೇ ಪ್ರಪಂಚಕ್ಕೆ ಕಾಲಿಡುತ್ತಾರೆ.
ಅವರು ಅಂಧರಾಗಿ ಹುಟ್ಟಿದಾಕ್ಷಣ ಅವರನ್ನು ಪ್ರಪಂಚದಲ್ಲಿನ ಮನುಕುಲ ಅಂಧರು ಎಂದು ಧೂಷಿಸದೇ ಮಾನವೀಯತೆಯಿಂದ ಅವರನ್ನೂ ಕೂಡ ನಮ್ಮವರಲ್ಲಿ ಒಬ್ಬರು ಎಂದು ನೋಡಿಕೊಂಡು ಕತ್ತಲೆಯಲ್ಲಿ ಹುದುಗಿರುವ ಅವರ ಪ್ರಪಂಚವನ್ನು ಬೆಳಕಿನೆಡೆಗೆ ಕೊಂಡೊಯ್ಯಬೇಕು ಎನ್ನುವ ಉತ್ತಮವಾದ ಸಾಮಾಜಿಕ ಕಳಕಳಿಯ ಸಂದೇಶವನ್ನು ಎತ್ತಿ ಹಿಡಿದ ಚಿತ್ರವೇ ಈ ಬೆಳಕು.