Blogs

ayushadmin | Jan 15, 2021 | 2110

ಉರಿಮೂತ್ರವೇ..? ಸ್ಟ್ರಾಬೆರ್ರಿ ಜ್ಯೂಸ್ ಕುಡಿಯಿರಿ..

ಇಂದಿನ ಅವಸರದ ಆಧುನಿಕ ಬದುಕಿನಲ್ಲಿ ಸುಲಭವಾಗಿ ತುತ್ತಾಗುವಂತಹ ಖಾಯಿಲೆ ಮೂತ್ರನಾಳದ ಸೋಂಕು. ಬೇಸಿಗೆ ಕಾಲದಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಸಮಸ್ಯೆ ಇದು. ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿರುವುದು, ಅತೀ ಕಡಿಮೆ ನೀರಿನ ಸೇವನೆ, ಸಾರ್ವಜನಿಕ ಶೌಚಾಲಯಗಳ ಬಳಕೆ ಮೂತ್ರನಾಳದ ಸೋಂಕಿಗೆ ಕಾರಣವಾಗಬಹುದು.

ಅದರಲ್ಲೂ ಆಧುನಿಕ ಶೌಚಾಲಯದ ಬಳಕೆ ಮಹಿಳೆಯರಲ್ಲಿ ಕಂಡು ಬರುವ ಮೂತ್ರನಾಳದ ಸಮಸ್ಯೆಗೆ ಮುಖ್ಯ ಕಾರಣ ಎನ್ನುತ್ತಾರೆ ತಜ್ಞರು. ಉರಿಮೂತ್ರ, ಮೂತ್ರ ವಿಸರ್ಜನೆಯಲ್ಲಿ ರಕ್ತಸ್ರಾವ, ಹಳದಿ ಬಣ್ಣದ ಮೂತ್ರ, ಮೂತ್ರವಿಸರ್ಜನೆ ಮಾಡುವಾಗ ಉರಿ, ನೋವು, ಕೆಳ ಹೊಟ್ಟೆನೋವು ಈ ಸಮಸ್ಯೆಯ ಮುಖ್ಯ ಲಕ್ಷಣಗಳು.

ಔಷಧಿಯಿಂದ ಈ ಸಮಸ್ಯೆ ಸಂಪೂರ್ಣವಾಗಿ ನಿವಾರಿಸಲು ಸಾಧ್ಯವೇ..? ಇಲ್ಲ, ಇದಕ್ಕೆ ಸರಿಯಾದ ಆಹಾರ ಕ್ರಮ ಅನುಸರಿಸಲೇಬೇಕು. ಮೂತ್ರನಾಳದ ಸೋಂಕಿನ ನಿವಾರಣೆಗೆ ಸ್ಟ್ರಾಬೆರ್ರಿ ಜ್ಯೂಸ್ ಉತ್ತಮ, ಮಾಡುವ ವಿಧಾನ ಹೀಗಿದೆ..

 

ಬೇಕಾಗುವ ಸಾಮಾಗ್ರಿಗಳು

ಸ್ಟ್ರಾಬೆರಿ ಹಣ್ಣು – 4 ರಿಂದ 5
ಸಾವಯವ ಸಕ್ಕರೆ – 2 ಚಮಚ

 

 

 

 

 

 

ಮಾಡುವ ವಿಧಾನ: ಸ್ಟ್ರಾಬೆರ್ರಿ ಹಣ್ಣನ್ನು ಚೆನ್ನಾಗಿ ತೊಳೆಯಬೇಕು, ಸ್ಟ್ರಾಬೆರ್ರಿಯ ತೊಟ್ಟಿನ ಮೇಲ್ಭಾಗದಲ್ಲಿ ಫಂಗಸ್ ಇಲ್ಲದಿರುವುದನ್ನು ನೋಡಿ ಬಳಸಿ, ಎರಡು ನಿಮಿಷ ಬಿಸಿನೀರಿನಲ್ಲಿ ನೆನೆಸಿ ಬಳಸಬಹುದು. ತೊಳೆದು, ಕತ್ತರಿಸಿದ ಸ್ಟ್ರಾಬೆರ್ರಿ ಹಣ್ಣಿಗೆ ಎರಡು ಚಮಚ ಸಾವಯವ ಸಕ್ಕರೆ ಸೇರಿಸಿ ರುಬ್ಬಿ, ಒಂದು ಲೋಟಕ್ಕೆ ಹಾಕಿ, ಅದಕ್ಕೆ ಸ್ವಲ್ಪ ನೀರು ಸೇರಿಸಿ ಕುಡಿಯಬಹುದು. ಹುಳಿ ಇದ್ದಲ್ಲಿ ಸ್ವಲ್ಪ ಸಾವಯವ ಸಕ್ಕರೆ ಸೇರಿಸಿ, ಮಧುಮೇಹ ಇದ್ದವರು ಸೈಂಧವ ಲವಣ ಬಳಸಬಹುದು.

Ayush TV

Ayush Tv- World's First Health, Wellness, Lifestyle and Infotainment Channel