Blog

129

ayushadmin Nov 10, 2020

Rahastha -ರಹಸ್ಥ | Social Movie |Kannada Short Movie |Ayush TV Short Movie Awards

Rahastha
What does a human crave for? Why is this fight for money? The story of interdependence has been captured very well in the movie ‘Rahastha’ by director A.Manoj Kumar. This is a dialogue less movie and the entire short movie has  a single character. This is the specialty of this movie. The entire movie is a silent journey.
 
ಎಪಿಸೋಡ್ – 23
ರಹಸ್ಥ
ಮನುಷ್ಯನ ಜೀವನಕ್ಕೆ ನಿಜವಾಗಲು ಬೇಕಾಗಿರುವುದು ಏನು..? ಏಕೆ ಈ ಹೊಡೆದಾಟ, ಕಾದಾಟ, ಹಣದ ಮೇಲಿನ ಮೋಹ, ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಲ್ಲದೇ ಬದುಕಲಾರ ಎನ್ನುವುದನ್ನು ಅದ್ಭುತವಾಗಿ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಎ. ಮನೋಜ್ ಕುಮಾರ್. ಈ ರಹಸ್ಥ ಚಿತ್ರದಲ್ಲಿ ಇಡೀ ಸಿನಿಮಾದಲ್ಲಿ ಸಂಭಾಷಣೆ ಇರುವುದಿಲ್ಲ. ಅಲ್ಲದೇ ಇಡೀ ಸಿನಿಮಾದಲ್ಲಿರುವುದು ಒಬ್ಬನೇ ನಟ. ಜೊತೆಗೆ ಇಡೀ ಸಿನಿಮಾದಲ್ಲಿರುವುದು ಇಡೀ ಬೆಂಗಳೂರಿನಲ್ಲಿರುವುದು ಒಬ್ಬನೇ ಮನುಷ್ಯ. ಇದೇ ಈ ರಹಸ್ಥ ಚಿತ್ರದ ವಿಶೇಷ.
ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ, ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಗೆ, ಎಲ್ಲರೊಳಗೊಂದಾಗು ಮಂಕುತಿಮ್ಮ. ರಹಸ್ಥ ಚಿತ್ರ ನೋಡಿದಾಗ ನಮಗೆ ಡಿವಿಜಿಯವರ ಈ ಸಾಲುಗಳು ನೆನಪಾಗುತ್ತದೆ. ಇಡೀ ಚಿತ್ರವೇ ಒಂದು ನಿಶಬ್ಧ ಪಯಣ.