ayushadmin | Nov 10, 2020 | 377
Murida Gombe -ಮುರಿದ ಗೊಂಬೆ | Family | Ayush TV Short Movie Awards
Murida Gombe
This is an emotional story which revolves around a doll. A doll purchased in a fair unveils the various facets of human life and their personalities. This is the story of an orphaned kid accompanied by a doll meets God and brings his parents. The story also unveils about how the lower class accept whatever done by the rich and depicting their good nature in doing so.
ಮುರಿದ ಗೊಂಬೆ
ಒಂದು ಗೊಂಬೆಯ ಸುತ್ತ ನಡೆಯುವ ಭಾವನಾತ್ಮಕ ಚಿತ್ರವೇ ಈ ಮುರಿದ ಗೊಂಬೆ. ಸಂತೆಯಲ್ಲಿ ಕೊಂಡು ತಂದಂತಹ ಒಂದು ಗೊಂಬೆ ಹೇಗೆ ಮನುಷ್ಯನ ಹಲವಾರು ಮುಖಗಳನ್ನು ಹಾಗೂ ಅವರ ವ್ಯಕ್ತಿತ್ವವನ್ನು ಬಯಲಿಗೆಳೆಯುತ್ತದೆ ಎನ್ನುವಂತಹ ಕಥಾಹಂದರವನ್ನು ಇಟ್ಟುಕೊಂಡು ಚಿತ್ರವನ್ನು ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ.
ತಂದೆ ತಾಯಿ ಇಲ್ಲದ ಒಂದು ಅನಾಥ ಮಗು ಹೇಗೆ ಒಂದು ಗೊಂಬೆಯ ಜೊತೆ ದೇವರ ಬಳಿ ಹೋಗಿ, ತನ್ನ ತಂದೆ ತಾಯಿಯನ್ನು ಕರೆದುಕೊಂಡು ಬರುವ ಒಂದು ಸುಂದರವಾದ ಕನಸಿನ ಲೋಕವನ್ನು ಈ ಚಿತ್ರ ತೆರೆದಿಡುತ್ತದೆ.
ಶ್ರೀಮಂತರು ಏನೇ ಮಾಡಿದರು ಕೆಳ ವರ್ಗದ ಜನರು ಹೇಗೆ ಅದನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಅವರಲ್ಲಿನ ಒಳ್ಳೆಯ ಗುಣಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.
https://www.youtube.com/watch?v=MYEFLaf-RC0