Swayamvara Parvathi Homa
Rs 1500/ for 2 Members

Person 1

Person 2

ಶಕ್ತಿಯ ಅವತಾರವಾದ ಪಾರ್ವತಿ ದೇವಿಯನ್ನು ಈ ಹೋಮದಲ್ಲಿ ಪೂಜಿಸಲಾಗುತ್ತದೆ. ಜಾತಕದಲ್ಲಿನ ಕೆಲವು ಅಡೆ ತಡೆಗಳು ಮತ್ತು ಸಮಸ್ಯೆಗಳಿಂದಾಗಿ,ಜೀವನ ಸಂಗಾತಿಯನ್ನು ಹುಡುಕುವುದು ಹೆಚ್ಚಾಗಿ ಬೇಸರದ ಸಂಗತಿ..ಸೂಕ್ತವಾದ ವಧು/ವರರನ್ನು ಹುಡುಕಲು ಹುಡುಕಲು ವಿವಿಧ ಅಡೆತಡೆಗಳನ್ನು ಎದುರಿಸುತ್ತಿರುವವರಿಗೆ,ಹಾಗೆಯೇ ಮುಂದೂಡಲ್ಪಟ್ಟ ಅಥವಾ ವಿಳಂಬವಾಗುವ ಜನರಿಗೆ ಸ್ವಯಂವರ ಪಾರ್ವತಿ ಹೋಮ ಮಾಡುವುದರಿಂದ ಪರಿಹಾರ ಕಂಡುಕೊಳ್ಳಬಹುದು.ಮದುವೆಯ ನಂತರ ಸಂಬಂಧದ ಸಮಸ್ಯೆಗಳನ್ನು ನಿವಾರಿಸಲು ಸಹ ಇದು ಸಹಾಯ ಮಾಡುತ್ತದೆ. ಇದು ಕುಟುಂಬದಲ್ಲಿ ಸುಖ ಮತ್ತು ಶಾಂತಿಯನ್ನ ದೊರಕಿಸಿಕೊಡುತ್ತದೆ.

ಸ್ವಯಂವರ ಪಾರ್ವತಿಯು ಶಿವನ ಪತ್ನಿ ಮತ್ತು ಶ್ರೀ ಮಹಾವಿಷ್ಣುವನ ಸಹೋದರಿ ಪಾರ್ವತಿ ದೇವಿಯು ವಧುವಿನ ರೂಪವಾಗಿದೆ.ಸ್ವಯಂವರ ಪಾರ್ವತಿಯ ಹೋಮವು ವಿಶೇಷವಾದ ಮಾರ್ಗವಾಗಿದೆ.ಎಕೆಂದರೆ ಇದು ಪಾರ್ವತಿ ದೇವಿಯು ಶಿವನನ್ನೇ ಮದುವೆಯಾಗಬೇಕೆಂಬ ಆಸೆಯನ್ನು ಈಡೇರಿಸಿರುತ್ತದೆ.

ಸ್ವಯಂವರ ಪಾರ್ವತಿಯ ಮೂಲ ಮಂತ್ರ

ಸ್ವಯಂವರ ಪಾರ್ವತಿ ಹೋಮ ಮಾಡುವುದರಿಂದ ಆಗುವ ಪ್ರಯೋಜನಗಳು;

  • ನಿಮ್ಮ ಆಯ್ಕೆಯ ಸೂಕ್ತ ಸಂಗಾತಿ ಸಿಗುತ್ತದೆ.
  • ಸಂತೋಷದ ದಾಂಪತ್ಯ ಜೀವನವನ್ನ ಅನುಭವಿಸಬಹುದು.
  • ವಿವಾಹಿತ ಮಹಿಳೆಯರು ಅರ್ಥಪೂರ್ಣ ಜೀವನವನ್ನ ನಡೆಸುತ್ತಾರೆ.
  • ನಿಮ್ಮ ಸಂಗಾತಿಯೊಂದಿಗೆ ಅರ್ಥಪೂರ್ಣವಾದ ಸಂಬಂಧವನ್ನ ಹಂಚಿಕೊಳ್ಳಬಹುದು.

ಪ್ರಸ್ತುತ ಕೋವಿಡ್ ನಂತಹ ಸಂದಿಗ್ದ ಸಂದರ್ಭದಲ್ಲಿ ನಿಮ್ಮ ಹಾಗೂ ಕುಟುಂಬದವರ ಜೀವನದಲ್ಲಿ ನಗುವೆಂಬ ಸವಿ ಸದಾ ಕೋಡಿರಲೆಂಬ ಆಶಯದೊಂದಿಗೆ ವಧು ವರರ ಅನ್ವೇಷಣೆಯಲ್ಲಿರುವ ಹಾಗೂ ದಾಂಪತ್ಯ ಜೀವನದಲ್ಲಿ ಉನ್ನತಿ ದೊರೆಯಲಿ ಹಾಗೂ ನಿಮ್ಮೆಲ್ಲರ ಕೌಟುಂಬಿಕ ಶ್ರೇಯಸ್ಸು ಹಾಗೂ ಸಕಲಾಭಿವೃದ್ಧಿಯನ್ನು ಆಶಿಸುತ್ತೇವೆ.ರಜಿಸ್ಟ್ರರ್ ಮಾಡಿಸಿಕೊಂಡಂತ ಪ್ರತಿಯೊಬ್ಬರಿಗೂ ಸ್ವಯಂವರ ಪಾರ್ವತಿ ಹೋಮದ ಮಹಾ ಪ್ರಸಾದವಾಗಿ ಸವದತ್ತಿ ದೇವಾಲಯದ ಕುಂಕುಮ,ರಕ್ಷೆ,ಶಿವ ಪಾರ್ವತಿಯರ ಬೆಳ್ಳಿಯ ನಾಣ್ಯ,ಕೈಗೆ ರಕ್ಷ,ಹಾಗೂ ಕುಂಕುಮ ಬಟ್ಟಲನ್ನ ಆಯುಷ್ ವಾಹಿನಿ ವತಿಯಿಂದ ನಿಮಗೆ ಕಳುಹಿಸಿಕೊಡಲಾಗುತ್ತದೆ.

ದಿನಾಂಕ ; 25.08.2021

ಸ್ಥಳ ; ಕಾಳಿಕಾದೇವಿ ದೇವಸ್ಥಾನ,ಶಿರಸಂಗಿ

ಸವದತ್ತಿ ಯಲ್ಲಮ್ಮ ದೇವಸ್ಥಾನದ ಹತ್ತಿರ.ಬೆಳಗಾಂ ಜಿಲ್ಲೆ.

ಪ್ರಸ್ತುತ ಕೋವಿಡ್ ಇರುವುದರಿಂದ ಪರೋಕ್ಷವಾಗಿ ಭಾಗವಹಿಸಿದ ತಾವುಗಳೆಲ್ಲರೂ ಮನೆಯಲ್ಲಿಯೇ ಕುಳಿತು ಈ ಹೋಮದ ನೇರಪ್ರಸಾರವನ್ನ ಆ ದಿವಸ ಆಯುಷ್ ವಾಹಿನಿಯಲ್ಲಿ ವಿಕ್ಷೀಸಬಹುದಾಗಿದೆ.